ಬೆಂದುದೇಕೆ ಮನವಿಂದು,
ನೋವ ಕಡಲ ಜಲದಿ ಮಿಂದು.
ಭಯದ ಕೋಟೆ ಉಕ್ಕಿ ಹರಿದಿರಲು,
ಸೋಲ ಕೊರಗು ನುಗ್ಗಿ ಮೆರದಿರಲು,
ಸತತ ವಿನೂತನ ಪ್ರಯತ್ನವ ಮಾಡಿ,
ಸಕಲ ಸುವಿಧವ ಕಾಡಿ ಬೇಡಿ,
ಸೃಜನ ಸುಪ್ರೀತರ ಅಳಿದು ಹಿಮ್ಮೆಟ್ಟಿ,
ಸಂತ ಶರಣರ ತುಳಿದು ಕೈತಟ್ಟಿ ,
ನೀಚವಾಗಿದುದೇಕೆ ತನುವಿಂದು
ಸುಖ ಭೋಗದ ಆವಿಗೆ ಬೆಂದು?
ಸೋಲ ಕೊರಗು ನುಗ್ಗಿ ಮೆರದಿರಲು,
ಬೆಂದುದೇಕೆ ಮನವಿಂದು,
ನೋವ ಕಡಲ ಜಲದಿ ಮಿಂದು? ಸತತ ವಿನೂತನ ಪ್ರಯತ್ನವ ಮಾಡಿ,
ಸಕಲ ಸುವಿಧವ ಕಾಡಿ ಬೇಡಿ,
ಸೃಜನ ಸುಪ್ರೀತರ ಅಳಿದು ಹಿಮ್ಮೆಟ್ಟಿ,
ಸಂತ ಶರಣರ ತುಳಿದು ಕೈತಟ್ಟಿ ,
ನೀಚವಾಗಿದುದೇಕೆ ತನುವಿಂದು
ಸುಖ ಭೋಗದ ಆವಿಗೆ ಬೆಂದು?
ದುಗುಡ ದೂರ ಅಳಿಸಿ ನಗಲು
ಸೋಲ ಸೊಬಗ ಬಳಸಿ ಬೆಳೆಯಲು
ಛಲದ ಕೋಟೆಯ ಕಟ್ಟಿಕೊಳ್ಳುತಿರಲು,
ಜಯದ ಹಾದಿಯ ಅಟ್ಟಿ ನಡೆಯುತಿರಲು,
ಮುಳ್ಳಾಗಿಹುದುದೇಕೆ ಮರುಳೇ,...
ಕನಸಿನೂರಿನ ಹೂವಿಂದು!
ಕೃತಜ್ಞತೆಗಳು: ನನ್ ಅಮ್ಮ!!!