ಲೇಬಲ್‌ಗಳು

ಶನಿವಾರ, ಜೂನ್ 5, 2021

Money Plant ತಾಯಿ

ಇವತ್ತು ವಿಶ್ವ ಪರಿಸರ ದಿನವಂತೆ... ಹೌದಾ!?  ಹತ್ತು ಹಲವು ವರ್ಷಗಳು ಬಂದು ಹೋದರು - ಪ್ರತೀ ಪರಿಸರದ ದಿನ ಬಂದಾಗಲೂ ಎಲ್ಲ ಕಡೆ, "ಗಿಡ ನೆಡಿ, ಪರಿಸರ ಉಳಿಸಿ" ಅನ್ನೋ ಮಾತು ಕೇಳಿರೋ ನೆನಪಿದೆ, ಸ್ಕೂಲ್ ಗಳಲ್ಲಿ essay, debate, speech - ಕಂಪೇಟಿಶನ್ಗಳಲ್ಲಿ miss ಇಲ್ದೆ ಈ topic ಇದ್ದೆ ಇರುತ್ತೆ! ಆದ್ರೂ ಇನ್ನೂ ಪರಿಸರ ಕಾಪಾಡಿ, ಗಿಡ ನೆಡಿ ಅಂತ ಕೂಗಿ ಕೂಗಿ ಹೇಳಿದ್ರು ಸಾಲ್ತಿಲ್ಲ ಅಲ್ವಾ!!! ಇರಲಿ ನಮ್ಮ ನಮ್ಮ ಶಕ್ತಿಗೆ ಅನುಸಾರ ನಾವ್ ನಾವು ಆದಷ್ಟು ಕೆಲಸ ಮಾಡಿದಿವಿ ಅಂದುಕೊಂಡು ಸುಮ್ಮನೆ ಆಗೋಣ ಬಿಡಿ. 🙃
ಇವೆಲ್ಲದರ ಮಧ್ಯೆ ನನ್ನ ಕೈಯಲ್ಲಿ ಹಿಡಿದು ಫೋಟೋ ತೆಗೆದು ಹಾಕಿರೋ ಈ ಗಿಡದ ಬಗ್ಗೆ ಒಂದು ಸ್ವಲ್ಪ ಮಾತು... ಆ ದಿನ ನನಗೆ ಚೆನ್ನಾಗಿ ನೆನಪಿದೆ, ಆಗಷ್ಟೇ ತಾರಸಿಲಿ ಗಿಡ ಬೆಳಸೋ ಕಾರ್ಯ ಶುರು ಆಗಿತ್ತು. ಅಲ್ಲಿ ಇಲ್ಲಿ ಸಂಪಾದಿಸಿ ತಂದ ಸಸಿ - ಗಿಡಗಳ potಗೆ ವರ್ಗ ಮಾಡೋ ಕಾರ್ಯ ಜೋರ್ ನಡೆದಿತ್ತು. ಆ ವರೆಗೂ ಅಪ್ಪ ಗಿಡ ಬೆಳೆಸಿದರೆ ನೋಡಿ ಖುಷಿ ಪಟ್ಟು ಅಷ್ಟೇ ಅಭ್ಯಾಸ ನನಗೆ, ಹೆಚ್ಚೆಂದರೆ ಒಂದಷ್ಟು ತುಳಸಿ ಗಿಡ ಬೆಳೆಸಿದ್ದೇ ಅಷ್ಟೇ. ಈಗ ಎಷ್ಟೋ ಗಿಡದ ಬಗ್ಗೆ ಮಾಹಿತಿ ಇದೆ, ನೆಟ್ಟ ಎಲ್ಲ ಗಿಡ ಬೆಳೆದಿದೆ ಅನ್ನೋ "ಗರ್ವ" ಕೂಡ ಇದೆ. 🤭😝 ಗರ್ವ ಒಳ್ಳೆಯದಲ್ಲ ಅನ್ನೋದು ಗೊತ್ತು ಆದ್ರೂ ಇರಲಿ... ಅದೇನೋ ಕೈಗುಣ ಅಂತಾರೆ ನೋಡಿ, ಅಪ್ಪ ಮತ್ತು ನಾನು ನೆಟ್ಟ ಯಾವ ಗಿಡ ಕೂಡ ಬಾಡಿಲ್ಲ!!! 
ಈ money plant ಗಿಡ ಕೂಡ ಹಾಗೆ! ಚಿಕ್ಕದಾಗಿ ಒಂದು ನಾಲ್ಕು ಎಲೆ ಬಿಟ್ಕೊಂಡು ಪುಟ್ಟ ಮಗು ತರಹ ಬಂದ ಈ ಗಿಡದ ಬೇರು ನೋಡಿ ನನ್ಗೆ ಎಲ್ಲಿಲ್ಲದ ಖುಷಿ - ಅಚ್ಚರಿ ಎರಡೂ ಆಗಿತ್ತು. ಇದು ನಾನು ನೆಟ್ಟ ( repotting) ಮಾಡಿದ ಮೊದಲ ಗಿಡ! ಮನುಷ್ಯನ ದೇಹದಲ್ಲಿ ಇರೋ nervous system ಹಾಗೆ ಅನಿಸ್ತು ಬೇರುಗಳ ನೋಡಿ! ಇದು ಒಂದು 3 ವರ್ಷ ಹಳೆಯ ಫೋಟೋ! ಈ money plant ತಾಯಿ ಈಗ ಹತ್ತು ಹಲವು ಮಕ್ಕಳನ್ನ ಹೆತ್ತು ನಮ್ಮ pot ಗಳ ಮಡಿಲಿಗೆ ಹಾಕಿದ್ದಾಳೆ! ಏನಿಲ್ಲ ಅಂದರೂ ಒಂದು 20 ಅಡಿ ಉದ್ದ ಬೆಳೆದಿದ್ದಾಳೆ! ಎಷ್ಟು ಕರುಣಾಮಯಿ ಅಂದ್ರೆ ಒಂದು ಮೂರ್ ಸಲ pot ಬದಲಾಯಿಸಲಾಯಿತು, ಎರಡು ಸಲ ಜಾಗ ಬದಲಾಯಿಸಬೇಕಾಯಿತು... ಒಂದಿಷ್ಟೂ ಮುನಿಸಿಕೊಳ್ಳದೆ ತನ್ನ ಬಿಳಲುಗಳನ್ನು ಹರವಿ ನಿಂತಿದ್ದಾಳೆ! ಗಿಡ ಬೆಳೆಸಿದರೆ ಪರಿಸರ ಉಳಿಯುತ್ತೋ ಇಲ್ಲವೋ ನನಗೆ ಗೊತ್ತಿಲ್ಲ, ಆದರೆ ಮನಸಿಗೆ ಹಿತ ಕಂಡಿತಾ ಕೊಡುತ್ತೆ!!! ಗಿಡಗಳಲ್ಲಿ ನಾನು ಸ್ನೇಹಿತರ ಕಂಡುಕೊಂಡಿದ್ದೇನೆ! ನಾವು ಅವನ್ನು ಆರಿಸಿಕೊಳ್ಳೋದು ಅಲ್ಲ, ಅವು ನಮ್ಮನ್ನ ಆರಿಸಿಕೊಂಡಿದೆ ಅನಿಸುತ್ತೆ! ಪರಿಸರ ನಮ್ಮನ್ನೆಲ್ಲ ಮೀರಿದ್ದು - ಅದಕ್ಕೆ ಸಾಕು ಅನಿಸಿದ್ರೆ ನಮ್ಮನ್ನ ಅಳಿಸಿ ಹಾಕುವುದು ಎಷ್ಟರ ಕೆಲಸ. ಆದರೂ ಹೆತ್ತ ತಾಯಿಯ ಹಾಗೆ, ಮಕ್ಕಳು ಮಾಡಿದ್ದೆಲ್ಲಾ ಸಹಿಸಿಕೊಂಡು ಇನ್ನೂ ನಮ್ಮನ್ನ ಇಲ್ಲಿ ಬಾಳಲಿಕ್ಕೆ ಬಿಟ್ಟಿದ್ದಾಳೆ. 💚🤍

ಪರಿಸರ ದಿನಾಚರಣೆಯ ಶುಭಾಶಯಗಳು!
ಗಿಡ ನೆಡಿ - ಖುಷಿ ಪಡಿ!!💚🤍