ನನ್ನ ಒಲವಿನ ಚಿಲುಮೆ ನೀನು
ಮನದ ತುಡಿತದ ಆಳ ನೀನು ,
ನನ್ನ ಕವಿತೆಯ ಸಾಲು ನೀನು.
ಮಿಡಿವ ಮನದ ಮಾಯೆ ನೀನು,
ಒಲುಮೆ ಗರಿಮೆ ಹಿರಿಮೆ ನೀನು
ಹಗಲು ಕಂಡ ಕನಸ್ಸು ನೀನು,
ನನ್ನ ಕವಿತೆಯ ಮನಸ್ಸು ನೀನು.
ಮುಗ್ಧ ಮನದ ಮೌನ ನೀನು,
ಮೌನ ಮಿಡಿದ ರಾಗ ನೀನು.
ರಾಗದಾಳದ ಭಾವ ನೀನು
ನನ್ನ ಕವಿತೆಯ ಪ್ರಾಸ ನೀನು.
ಪ್ರಾಣ ಪಕ್ಷಿ, ಪ್ರಣತಿ ನೀನು
ಪ್ರಣತಿ ಕಂಡ ಬಿಂಬ ನೀನು,
ಕನ್ನಡಿಯಲ್ಲಿ ಪ್ರತಿಬಿಂಬ ನೀನು,
ನಾನು ಬರೆದ ಕವಿತೆ ನೀನು.