ನೆನಪಿನಂಗಳದಿಂದ- ಬಾಳದಾರಿಗೆ
ಋತುಮಾನ ಹಗುರಾಗಿ ಎಲೆ ಚಿಗುರು ಬರಡಾಗಿ
ಬೇಸತ್ತ ಮನಕ್ಕೆ ಚಿರಶಾಂತಿ ನಾ ಕೋರಿ ನಿಂತಿದ್ದೆ
ಬಾಳ ಹೊಸ್ತಿಲ ಮೇಲೆ ಚಿಂತಿಸುತ್ತ
ಹೊರಡಲೇ ನಾನು ಮುಂದಕ್ಕೆ ? ಇಲ್ಲ ಹಿಂದಕ್ಕೆ?
ನೆನಪಿನಂಗಳದಿಂದ...
ಈ ಜೀವನವೇ ಹೀಗೆ ಒಮ್ಮೆ ನಗು
ಒಮ್ಮೆ ಅಳು ಮತ್ತೆ ಖುಷಿ ಜೊತೆಗೆ ಕಸಿವಿಸಿ
ನಮ್ಮವರಾರು ಎಂಬ ಹುಡುಕಾಟದಲ್ಲಿ
ಸಾಗಿ ಹಾಕುವ ಬದುಕು ಕಪ್ಪು ಮಸಿ.
ಬಾಳದಾರಿಗೆ ಗೂತಹೊಡೆದು ನಿಂತು
ಕೈಚಾಚಿ ಕರೆವ ಪ್ರೀತಿ- ವಾತ್ಸಲ್ಯವನು
ನಲ್ಮೆಯಿಂದ ಒದ್ದು
ಇರುವವರು ಹೋಗುವವರೆಗೂ "ಯಾರು ಇಲ್ಲ, ಏನು ಇಲ್ಲ" ಎಂದು
ಹೋದಮೇಲೆ "ಯಾರು ಇಲ್ಲ, ಏನು ಇಲ್ಲ, ಎಂದು
ಕಪ್ಪು ಮಸಿಯ ಬದುಕನ್ನು ಮತ್ತು ತೊಳೆದು
ತಿದ್ದಿ, ತೀಡಿ, ಒಗೆದು, ಬಿಳಿಯ ಹಾಳೆಯನ್ನಾಗಿಸಿ
ಮತ್ತೆ, ಯಾರು ಇಲ್ಲ, ಏನು ಇಲ್ಲವೆಂದೆನಿಸಿ
ಸೂಕ್ಶ್ಮ ಭಾವನೆಗಳು, ಹಂಚಿ, ಹರಿದು
ಹೋದ ಮೇಲೆ, ಮನಸ್ಸು ಕರಗಿ ಮಿಂದು
ಮಿಂಚಿ ಹೋಗಲಿರುವ ಕಾಲದ ಕೈಹಿಡಿದು
"ಮುಂದಕ್ಕೆ!", ಎಂದು ಹಸಿ ನಗೆಯ ಬೀರಿ ಸಾಗಿದೆ
...ಬಾಳದಾರಿಗೆ ಮರಳಿ
ಸೂಕ್ಶ್ಮ ಭಾವನೆಗಳು, ಹಂಚಿ, ಹರಿದು
ಹೋದ ಮೇಲೆ, ಮನಸ್ಸು ಕರಗಿ ಮಿಂದು
ಮಿಂಚಿ ಹೋಗಲಿರುವ ಕಾಲದ ಕೈಹಿಡಿದು
"ಮುಂದಕ್ಕೆ!", ಎಂದು ಹಸಿ ನಗೆಯ ಬೀರಿ ಸಾಗಿದೆ
...ಬಾಳದಾರಿಗೆ ಮರಳಿ