ಯಾಕೋ ಈ ನಡುವೆ ಕವಿತೆ ಗೀಚಕ್ಕೆ ಸಮಯ ಇದ್ರೂ ಆಗ್ಲಿಲ್ಲ.
ಇವತ್ತು ತುಂಬಾ ಕೆಲಸ ಇದ್ರೂ ಮಾಡಕ್ಕೆ ಆಗ್ಲಿಲ್ಲ... ಹಾಗಾಗಿ ಬರೆದೆ ಈ ಕವಿತೆ...
ಇವತ್ತು ತುಂಬಾ ಕೆಲಸ ಇದ್ರೂ ಮಾಡಕ್ಕೆ ಆಗ್ಲಿಲ್ಲ... ಹಾಗಾಗಿ ಬರೆದೆ ಈ ಕವಿತೆ...
ಮೌನದಲ್ಲಿ,
ಮೂಕ ವಿಸ್ಮಯದಲ್ಲಿ,
ಮುಕ್ತಾಯವ ಬರೆಯಲೊಲ್ಲೆ...
ಕವಿತೆಯ ಸಾಲಲ್ಲಿ,
ಪ್ರಾಸದ ಮಡಿಲಲ್ಲಿ,
ಮಾತನು ಮರೆಯಲೊಲ್ಲೆ...
ಹೂವಿನ ನಗುವಲ್ಲಿ,
ಗಾಳಿಯ ಅಲೆಗಳಲ್ಲಿ,
ಸಂತಾಪವ ಸೂಚಿಸಲೊಲ್ಲೆ...
ದ್ವಂದ್ವದ ಗಿರಿಯಲ್ಲಿ,
ನೆನಪಿನ ಹಾಳೆಗಳಲ್ಲಿ,
ಪೂರ್ಣ ವಿರಾಮವನಿಡಲೊಲ್ಲೆ,
ನೋವಲ್ಲಿ, ನಲಿವಲ್ಲಿ,
ಕನಸಿನ ಮರೆಯಲ್ಲಿ,
ಕ್ಷಣಗಳ ಮರೆಯಲೊಲ್ಲೆ ...
ಮೂಕವಾಗಲೊಲ್ಲೆ...
ಮೌನತಾಳಲೊಲ್ಲೆ...
ಮಾತಿಲ್ಲದೆ ಮುಕ್ತಾಯವ ಹಾಡಲೊಲ್ಲೆ...